...ಮುಂದುವರಿದ ಭಾಗ
ನಂಗೆ ಪೇರಲೆ ಹಣ್ಣಿಗಿಂತ, ಹಂಪು ಅಂದ್ರೆ ಬಹಳ ಇಷ್ಟ ..ಗದ್ದೆ ಕೊನೆಯಲ್ಲಿ ಇದ ಪೇರಲೆ ಮರಕ್ಕೆ ಬೇಲಿ ಹಾರಿ ಹೋಗ್ತಿದ್ವಿ...
ಬೇಲಿ ಹಾರಿದ ನಂತ್ರಾ..ತಲೆ ತನಕ ಹುಲ್ಲು ಬೆಳದಿರ್ತಿತ್ತು.. ಯಾರ್ರ - ಬಿರ್ರಿ ಓಡ್ತಿದ್ವಿ ....
ನಾವು ಹೋದಾಗ, ಹುಲ್ಲು ಮುರಿದು ಅಗೋ ದಾರಿ ನೋಡಿದ್ರೆ ಏನೋ ಕುಷಿ..
ಮರ ಹತ್ರ ಬಂದ್ ಬಿಟ್ಟು ..ಮೊದ್ಲು ಯಲ್ಲಿ ಯಲ್ಲಿ ಎಷ್ಟು ಎಷ್ಟು ಕಾಯಿ ಹಂಪು ಇದೆ ಅಂತಾ ನೋಡಿ,
ಲೆಕ್ಕಾ ಹಾಕಿ ಆಮೇಲೆ ..ಮಂಗನ ಕೆಲ್ಸಾ ...
ಅಂತು ಕೊಯಿದು .ಹಂಚಿ... ತಿಂದು ..ಮನೆಗೆ ಬರೋವರಿಗೆ ...ಕಾಲೆಲ್ಲ ತುರ್ಕೆ ಶುರು ...
ಬಚಲ್ಲಲಿ ..ಇರೋ ಬಿಸಿನೀರು ... ಮನಸಿಗ್ಗೆ ..ಸಮಾಧಾನ ಅಗೊವರಿಗೆ ..ಚಲ್ತಿದ್ವಿ ...( ಸರಿಯಾಗಿ ತೊಳ್ಡಿದು ...ಬೈದ ಮೇಲೇನೆ ..)
ಮನೆ ಒಳಗೆ ಕಾಲ್ ಇಟ್ರೆ, ಕರೆಂಟ್ ಇಲ್ಲಾ ...
ದೇವರಿಗೆ ..ಹಂಗೋ ಹಿಂಗೋ ನಮಸ್ಕಾರ ಮಾಡಿ ...ಮತ್ತೆ ಹೆಬ್ಬಾಗಿಲ್ಲಿಗೆ ಓಡ್ತಿದ್ವಿ ..
ಸಂಜೆ ಮಡಿದ ಕೆಲ್ಸನೆಲ್ಲ ...ಇಡಿ ಊರಿಗೆ ..ಪ್ರಸಾರ ಮಾಡ್ತಿದ್ವಿ ...
"ಏನೋ ಕೊಚ್ಚಿ ..ಕಡಿದು ಹಾಕಿದಂಗೆ ..."
ಏನೋ ಕುಷಿ ಇತಪಾ ...
ಮುಸಂಜೆ ಹೊತಲ್ಲಿ ಊರವರೆಲ್ಲ ...ಯಾರದೋ ಮನೆಲ್ಲಿ ಕುತ್ತು ...ಮಾತಾಡ್ತಾ ಇರ್ಬೇಕಾದ್ರೆ ...
ನಾವು ಎಲ್ಲಾ ಮುಚ್ಗಂಡು ..ಕೇಳ್ತಾ ಇದ್ವಿ ...
No comments:
Post a Comment