Thursday, August 4, 2011

ಮಳೆಗಾಲದ ಒಂದು ದಿನಾ

ಧೋ ಧೋ ಮಳೆಗಳು ..
ಗಿಜಿ ಗಿಜಿ ..ಹಳ್ಳಿಗಳು ..
ಮಧ್ಯಾನದ ಕತ್ತಲುಗಳು..
ಹಂಚಿನ ಮೇಲೆ ಬೀಳುವ ಆಲಿ ಕಲ್ಲುಗಳು..
ಹಾರಾಡುವ ಅಡಿಕೆ ಮರಗಳು ..

ಬ್ರಿಜ್ಜಿನ ಮೇಲೆ ನೀರುಗಳು..
ತೇಲುವ ತೆಂಗಿನ ಕಾಯಿಗಳು..
ಶಾಲೆಗೆ ರಜೆಗಳು ...
ಅಡಿಕೆ ಮರದ ಜಾರುವ ಸಂಕಗಳು ..
ಕಂಬಳಿ ಕೊಪ್ಪೆಗಳು ...
ರಕ್ತ ಹೀರುವ ಉಮಬಳಗಳು...

ಬೆಟ್ಟದ ಮೇಲಿನ ಚಳ್ಳೆ ಹಣ್ಣುಗಳು ..
ಹುಳಿ ನೆರಲೆಗಳು ...
ಸುಟ್ಟ ಗೇರು ಬೀಜಗಳು ...
ಹಲಸಿನ ಬೀಜಗಳು ...

ಚಿಗುರಿದ ಶಿವರಾತ್ರಿ ಹೂವುಗಳು..
ಹಸಿರ ಸಮುದ್ರಗಳು ...
ಹೊಳೆವ ನೀರಿನ ವಜ್ರಗಳು..
ಬೆಟ್ಟದ ಮೇಲಿನಿಂದ ಹರಿದು ಬರುವ ಸುಂದರ ಧಾರೆಗಳು..

ಯಲ್ಲರೂ ಕೂತ್ತು ಆಡುವ ಕತ್ತೆಗಳು ..
ರೇಡಿಯೋದಲ್ಲಿ ಬರುವ ಸ್ಕೋರ್ ವಿವರಗಳು ....

No comments:

Post a Comment